English

ಬೆಂಗಳೂರು ನಗರ ಸಂಚಾರ ಪೊಲೀಸ್

ಬೆಂಗಳೂರು ನಗರ ಸಂಚಾರ ವಾರ್ಡ್‌ನ್‌ಸಂಘ - ಪೊಲೀಸರ ಸಹಯೋಗದೊಂದಿಗೆ

ಬೆಂಗಳೂರುನಗರ ಸಂಚಾರಿ ಪೊಲೀಸರಿಗೆ ಅವರ ಕರ್ತವ್ಯದಲ್ಲಿ ನೆರವಾಗಲು ಹಾಗೂ ವಿವಿದ ನಿಯಮಗಳನ್ನು ಜಾರಿಗೊಳಿಸಲು ದಿನಾಂಕ.೩೦.೦೮.೧೯೮೫ ರಲ್ಲಿ ಬೆಂಗಳೂರುನಗರ ಸಂಚಾರ ವಾರ್ಡನ್ ಸಂಘವು ಅಸ್ತಿತ್ವಕ್ಕೆ ಬಂದಿತ್ತು.

ಅಂದಿನಿಂದ ಬೆಂಗಳೂರುನಗರ ಸಂಚಾರ ವಾರ್ಡನ್ ಸಂಘವು ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ಅವರ ಕಾರ್ಯಾನುಷ್ಠಾನದಲ್ಲಿ ತುಂಬಾ ಪರಿಣಾಮಕಾರಿಯಾಗಿ ನೆರವಾಗುತ್ತಿದೆ. ಎಲ್ಲರ ನಿರೀಕ್ಷೆಯನ್ನು ಮೀರಿ ಬೆಂಗಳೂರುನಗರ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು, ಇದರಿಂದ ಪೊಲೀಸರಿಗೆ ನಿರ್ವಹಣೆಯು ತುಂಬಾ ಕಷ್ಠದಾಯಕವಾಗಿದ್ದು, ಇಂತಹ ಶ್ರಮದ ಕರ್ತವ್ಯವನ್ನು ಶಮನಗೊಳಿಸಲು ಬೆಂಗಳೂರುನಗರ ಸಂಚಾರ ವಾರ್ಡನ್ ಸಂಘವು ಪೊಲೀಸರೊಂದಿಗೆ ಭಾಗಿಯಾಗುತ್ತದೆ.

ಬೆಂಗಳೂರುನಗರ ಸಂಚಾರ ವಾರ್ಡನ್ ಸಂಘದ ಗುರಿ ಮತ್ತು ಉದ್ದೇಶಗಳು:

• ವಾಹನ ಸವಾರರಿಗೆ ರಸ್ತೆ ನಿಯಮಗಳ ಬಗ್ಗೆ ಜವಾಬ್ದಾರಿಯಿಂದ ವರ್ತಿಸುವಂತೆ ಎಚ್ಚರಿಕೆ ನೀಡುವುದು

• ಪೊಲೀಸರ ಸಹಕಾರದೊಂದಿಗೆ ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ಶಿಕ್ಷಣ ಅಂದೋಲವನ್ನು ನಡೆಸುವುದು.

• ಬೆಂಗಳೂರು ನಗರ ಸಂಚಾರಿ ಪೊಲೀಸರ ಮನವಿಯ ಮೇರೆಗೆ ವಾಹನ ಹಾಗೂ ಪಾದಚಾರಿಗಳ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವುದು.

• ಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸಲು ಅಭಿಪ್ರಾಯ ಸಂಗ್ರಹಣೆ ಮಾಡುವುದು ಮತ್ತು ಇದನ್ನು ಪ್ರಾಧಿಕಾರಕ್ಕೆ ನೀಡುವುದು.

• ತಾವು ವ್ಯೆಯಕ್ತಿಕವಾಗಿ ಗಮನಿಸಿದ ಸಂಚಾರಿ ಉಲ್ಲಂಘನೆಯನ್ನು ಸಂಚಾರಿ ಪೊಲೀಸರಿಗೆ ವರದಿ ಮಾಡುವುದು.

• ಅಟೋ/ಟ್ಯಾಕ್ಸಿ ಚಾಲಕರು ಬಾಡಿಗೆ ಹೋಗಲು ನಿರಾಕರಿಸುವುದು, ಹೆಚ್ಚಿಗೆ ಬಾಡಿಗೆ ಕೇಳುವುದು ಇತ್ಯಾದಿಗಳನ್ನು ಸಂಚಾರಿ ಪೊಲೀಸರಿಗೆ ವರದಿ ಮಾಡುವುದು.

• ವಿಶೇಷ ಸಂಧರ್ಬಗಳಲ್ಲಿ ಸಂಚಾರಿ ಪೊಲೀಸರಿಗೆ ನೆರವಾಗುವುದು.

• ಸಂಚಾರಿ ವ್ಯವಸ್ಥೆಯನ್ನು ಉತ್ತಮಪಡಿಸಲು ಅದರ ನಿಯಂತ್ರಣ ಮತ್ತು ಶಿಕ್ಷಣ ತಿಳುವಳಿಕೆಯ ಬಗ್ಗೆ ಶಿಬಿರಗಳನ್ನು ನಡೆಸುವುದು.

• ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಕರಪತ್ರಗಳು, ಪೋಸ್ಟರ್‍ಸ್‌ಗಳು ಮತ್ತು ಪುಸ್ತಕಗಳನ್ನು ಹಂಚುವುದು.

• ಸಂಚಾರಿ ಪೊಲೀಸರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಸಂಚಾರಿ ಶಿಕ್ಷಣ ಅಂದೋಲನ ಮತ್ತು ಸಂಚಾರಿ ತರಭೇತಿ ಶಿಬಿರಗಳ ವ್ಯವಸ್ಥೆ ಮಾಡುವುದು.

ಬೆಂಗಳೂರುನಗರ ಪೊಲೀಸ್ ಕಮೀಷನರ್‌ರವರು ಬೆಂಗಳೂರುನಗರ ಸಂಚಾರ ವಾರ್ಡನ್ ಸಂಘದ ಮುಖ್ಯಸ್ಥರಾಗಿರುತ್ತಾರೆ. ಈ ಸಂಘಟನೆಯಲ್ಲಿ ವೈಧ್ಯರು, ಇಂಜಿಯನರ್, ವಕೀಲರು, ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳು, ಸರ್ಕಾರಿ ಉದ್ಯೋಗಿಗಳು, ವ್ಯಾಪಾರಸ್ಥರು, ಉದ್ದಿಮೆದಾರರು, ಐಟಿ &ಬಿಟಿ ಉದ್ಯೋಗಿಗಳು ಹಾಗೂ ಇತರೆಯವರು ಸದಸ್ಯರಾಗಿರುತ್ತಾರೆ. ಇವರೆಲ್ಲರೂ ಈ ಸಂಘಟನೆಗೆ ಮತ್ತು ಸಾರ್ವಜನಿಕರಿಗೆ ಸೇವೆ ಮಾಡಲು ಸ್ವಯಂ ಇಚ್ಚೆಯಿಂದ ಸೇರಿದವರಾಗಿದ್ದಾರೆ. ಇಂತಹ ಸದಸ್ಯರು ತಮ್ಮ ಪ್ರದೇಶದಲ್ಲಿ ವಾರಕ್ಕೆ ಎರಡು ಭಾರಿ ಕರ್ತವ್ಯ ಮಾಡುತ್ತಾರೆ, ಕೆಲವರು ವಾರಪೂರ್ತಿ ಸಂಚಾರಿ ಪೊಲೀಸರಿಗೆ ಸಹಾಯ ಮಾಡುತ್ತಾರೆ. ಇವರು ವಿಶೇಷ ಸಂದರ್ಭಗಳಾದ ಕ್ರಿಕೆಟ್ ಮ್ಯಾಚ್, ಏರ್ ಶೋ, ಧಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ, ಹಾಗೂ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಸಂಚಾರಿ ಪೊಲೀಸರೊಂ ದಿಗೆ ಕರ್ತವ್ಯ ನಿರ್ವಹಿಸುತ್ತಾರೆ.

Want to join the Traffic Warden Organisation?